ಬಮ್ಮನಹಳ್ಳಿ ವೆಬ್ ಸೈಟ್ ಗೆ ಸುಸ್ವಾಗತ

ಬಮ್ಮನಹಳ್ಳಿ ಯುವಕರ ಬಗ್ಗೆ ಮಾಹಿತಿ ಲಭ್ಯ    

 

ಗದಗ : ಪದ್ಮ ಭೂಷಣ ಪುರಷ್ಕ್ರುತ ಡಾ| ಪಂಡಿತ್ ಪುಟ್ಟರಾಜ ಗವಾಯಿ (97) ಶುಕ್ರವಾರ ವೀರೇಶ್ವರ ಪುಣ್ಯಾಶ್ರಮದಲ್ಲಿ ಇಂದು ಮಧ್ಯಾಹ್ನ 12-30ಕ್ಕೆ ಲಿಂಗೈಕ್ಯರಾದರು. ಹಿಂದೂಸ್ತಾನಿ ಸಂಗೀತ ಲೋಕಕ್ಕೆ ಅಪಾರ ಕೊಡುಗೆ ನೀಡಿದ್ದ ಇವರು ಭಕ್ತರ ಪಾಲಿಗೆ ನಡೆದಾಡುವ ದೇವರಾಗಿದ್ದರು.
1914 ಮಾರ್ಚ್ 3ರಂದು ಹಾವೇರಿ ಜಿಲ್ಲೆಯ ಹಾನ ಗಲ್‌ನ ದೇವರ ಹೊಸಕೋಟೆ ಯಲ್ಲಿ ಜನಿಸಿದ ಪುಟ್ಟರಾಜ ಗವಾಯಿ  ಮೂಲ ಹೆಸರು ಪುಟ್ಟಯ್ಯಜ್ಜ ಎಂಬುದಾಗಿತ್ತು.  ಬಾಲ್ಯ ದಲ್ಲಿಯೇ ಗವಾಯಿ ದೃಷ್ಟಿ ಕಳಕೊಂಡಿದ್ದರು. ಮಾವ ಚಂದ್ರಶೇಖರ್  ಪುಟ್ಟಯ್ಯಜ್ಜನಿಗೆ ಬೆಳಕಾಗಿ ಅವರ ಬೆಂಗಾವಲಿಗೆ ನಿಂತಿದ್ದರು. ಬಾಲ್ಯದಲ್ಲಿಯೇ ಸಂಗೀತ ಶಿಕ್ಷಣ ಕ್ಕಾಗಿ ಪಂಡಿತ ಪಂಚಾಕ್ಷರಿ ಗವಾಯಿಗಳ ಆಶ್ರಮಕ್ಕೆ ಸೇರಿಸಿದ್ದರು.
ಗವಾಯಿ ಅವರ ಆರೋಗ್ಯ ಸ್ಥಿತಿ ಉಲ್ಬಣಿಸಿದ ಹಿನ್ನಲೆಯಲ್ಲಿ ಕೆಎಲ್ಇ ಆಸ್ಪತ್ರೆಗೆ ನ್ಯೂಮೋನಿಯ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಅಲ್ಲಿಯೂ ಅವರ ಆರೋಗ್ಯ ಸ್ಥಿತಿ ಸುಧಾರಿಸದ ಹಿನ್ನೆಲೆಯಲ್ಲಿ  ವೀರೇಶ್ವರ ಪುಣ್ಯಾಶ್ರ ಮಕ್ಕೆ ಕರೆತರಲಾಗಿತ್ತು. ಆಶ್ರಮದಲ್ಲಿಯೇ ವೈದ್ಯರು ಅವರಿಗೆ ಚಿಕಿತ್ಸೆ ನೀಡುತ್ತಿದ್ದರು.
ಗದಗ ಜಿಲ್ಲೆಯಾದ್ಯಂತ ಎರಡು ದಿನಗಳ ಕಾಲ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಇಂದು ಮಧ್ಯಾಹ್ನ 2 ರಿಂದ ಶ್ರೀಗಳ ಮೃತ ಶರೀರವನ್ನು ಸಾರ್ವಜನಿಕ ದರ್ಶನಕ್ಕೆ ಇಡಲಾಗುವುದು.  ನಾಳೆ ಮಧ್ಯಾಹ್ನ ಗವಾಯಿ ಅವರ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ಆಶ್ರಮದ ಮೂಲಗಳು ತಿಳಿಸಿವೆ.
1944 ರಲ್ಲಿ ವೀರೇಶ್ವರ ಆಶ್ರಮದ ಪೀಠಾಧಿಪತಿಯಾಗಿ ಹೊಣೆಗಾರಿಕೆ ವಹಿಸಿಕೊಂಡಿದ್ದ ಪುಟ್ಟಯ್ಯಜ್ಜ  ಹಿಂದೂಸ್ತಾನಿ, ಕರ್ನಾಟಕ ಸಂಗೀತ, ಹಾರ್ಮೋನಿಯಂ ನುಡಿಸುವ ಮೂಲಕ ಸಂಗೀತ ಸಾಮ್ರಾಟ್ ಎಂಬ ಕೀರ್ತಿಗೆ ಭಾಜನರಾಗಿದ್ದರು.  ಐದು ದಶಕಗಳಿಂದ ಸಾವಿರಾರು ಅಂಧರಿಗೆ ಶಿಕ್ಷಣ ನೀಡುವ ಮೂಲಕ ಅಂಧರ ಪಾಲಿಗೆ ಬೆಳಕಾಗಿದ್ದರು.
ಗವಾಯಿಗಳಿಗೆ ಅಪಾರ ಸೇವೆಯನ್ನು ಪರಿಗಣಿಸಿ 1975ರಲ್ಲಿ ಕರ್ನಾಟಕ ವಿವಿಯಿಂದ ಗೌವರ ಡಾಕ್ಟರೇಟ್, ಪ್ರತಿಷ್ಠಿತ ಭಾರತ ರತ್ನ ಪ್ರಶಸ್ತಿ, 1993ರಲ್ಲಿ ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿ, 2000ನೇ ಇಸವಿಯಲ್ಲಿ ಬಸವಶ್ರೀ ಪ್ರಶಸ್ತಿ, ಚೌಡಯ್ಯ ಪ್ರಶಸ್ತಿ, ನಾಡೋಜ ಗೌರವ, ಕನಕ ಪುರಂದರ ಪ್ರಶಸ್ತಿ ಗಳು ಬಂದಿವೆ.  ನಾಟಕ, ಸಾಹಿತ್ಯ ಸೇರಿದಂತೆ ಮೂರು ಭಾಷೆಯಲ್ಲಿ ನೂರಾರು ಕೃತಿ ರಚಿಸಿದ್ದಾರೆ. ಬಹುಭಾಷಾ ಪಂಡಿತರಾಗಿದ್ದ ಗವಾಯಿ ಬ್ರೈಲ್ ಲಿಪಿಯಲ್ಲಿ ಭಗವದ್ಗೀತೆ ರಚಿಸಿದ್ದರು.

 

Search site

shivanand.bh@gmail.com