ಬಮ್ಮನಹಳ್ಳಿ ವೆಬ್ ಸೈಟ್ ಗೆ ಸುಸ್ವಾಗತ

About Us

ಕರ್ನಾಟಕ ರಾಜ್ಯದಲ್ಲಿ ಈ ಗ್ರಾಮವನ್ನು ಬೆಳಕಿಗೆ ತರುವುದೆ ನಮ್ಮ ಉದ್ದೇಶ

ಸ್ವಾಮಿ ವಿವೇಕಾನಂದ ತತ್ವಾದರ್ಶ ಪಾಲಿಸಿ

ಮುದ್ದೇಬಿಹಾಳ; ವಿದ್ಯಾರ್ಥಿಗಳು ಮತ್ತು ಯುವಜನತೆ ಶಿಸ್ತು ಮತ್ತು ಸಂಸ್ಕಾರ ಬೆಳೆಸಿಕೊಂಡು ಯಶಸ್ವಿ ಜೀವನ ನಡೆಸಬೇಕು. ಸ್ವಾಮಿ ವಿವೇಕಾನಂದ ತತ್ವಾದರ್ಶವನ್ನು ಪಾಲಿಸಬೇಕು ಎಂದು ಬೆಂಗಳೂರು ರಾಮಕೃಷ್ಣ ಆಶ್ರಮದ ಸ್ವಾಮಿ ಯುಕ್ತೀಶಾನಂದಜಿ ಕರೆ ನೀಡಿದ್ದಾರೆ.

 

ಇಲ್ಲಿನ ವಿಬಿಸಿ ಪ್ರೌಢಶಾಲೆಯ ಸಾಯಿ ರಂಗಮಂದಿರದಲ್ಲಿ ಶನಿವಾರ ಸ್ವಾಮಿ ವಿವೇಕಾನಂದರ 150ನೇ ಜನ್ಮದಿನೋತ್ಸವ ನಿಮಿತ್ತ ಹಮ್ಮಿಕೊಂಡಿದ್ದ ಸ್ವಾಮಿ ವಿವೇಕಾನಂದರ ಮಹಾರಥಯಾತ್ರೆಯ ಬಹಿರಂಗ ಸಭೆಯಲ್ಲಿ ಅವರು ವಿಶೇಷ ಉಪನ್ಯಾಸ ನೀಡುತ್ತಿದ್ದರು.

 

ವಿವೇಕಾನಂದರ ಜೀವನ ಚರಿತ್ರೆ ತೆರೆದ ಪುಟ ಇದ್ದಂತೆ. ಯಾರು ಬೇಕಾದರೂ ಆದರ್ಶವಾಗಿಟ್ಟುಕೊಂಡು ಪಾಲಿಸಬಹುದು. ಯುವಜನತೆ ಹಿರಿಯರಿಗೂ ವಿವೇಕಾನಂದರ ಬಗ್ಗೆ ಇರುವ ಪುಸ್ತಕಗಳನ್ನು ಕಾಣಿಕೆಯಾಗಿ ನೀಡಿ ಅವರಲ್ಲಿಯೂ ಸಂಸ್ಕಾರ ಮತ್ತು ಶಿಸ್ತು ಬೆಳೆಸಲು ಮುಂದಾಗಬೇಕು ಎಂದು ಅವರು ಹೇಳಿದರು.

 

ಬಿಜಾಪುರ ವಿವೇಕಾನಂದ ಆಶ್ರಮದ ಸ್ವಾಮಿ ನಿರ್ಭಯಾನಂದ ಸರಸ್ವತಿ ಮಹಾರಾಜರು ಪ್ರಾಸ್ತಾವಿಕವಾಗಿ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ತಹಸೀಲ್ದಾರ ಸಿ.ಲಕ್ಷ್ಮಣ ಮಾತನಾಡಿದರು.

 

ಮಾಜಿ ಶಾಸಕ ಎಂ.ಎಂ.ಸಜ್ಜನ ಬಹಿರಂಗ ಸಭೆ ಉದ್ಘಾಟಿಸಿದರು.

 

ಮಹಾರಥಯಾತ್ರೆಯ ಕರ್ನಾಟಕ ರಾಜ್ಯ ಸಂಚಾಲಕ ಬೆಂಗಳೂರು ರಾಮಕೃಷ್ಣ ಮಠದ ಸ್ವಾಮಿ ತ್ಯಾಗೀಶ್ವರಾನಂದ ಮಹಾರಾಜ, ಆಂಧ್ರಪ್ರದೇಶದ ಸ್ವಾಮಿ ಅರ್ಚನಾನಂದ, ಬಿಜಾಪುರ ರಾಮಕೃಷ್ಣ ಆಶ್ರಮದ ಸ್ವಾಮಿ ನರೇಶಾನಂದಜಿ ಸಾನಿಧ್ಯ ವಹಿಸಿದ್ದರು.

 

ತಾಲೂಕು ಕಸಾಪ ಅಧ್ಯಕ್ಷ ಅಡಿವೆಪ್ಪ ಕಡಿ, ವೀವಿವ ಸಂಘದ ಗೌರವ ಕಾರ್ಯದರ್ಶಿ ಎಂ.ಬಿ.ನಾವದಗಿ, ಹೇಮರಡ್ಡಿ ಮಲ್ಲಮ್ಮ ಸಂಸ್ಥೆ ಅಧ್ಯಕ್ಷ ಎಸ್.ಜಿ.ಪಾಟೀಲ, ಮಹಾರಥದ ಜಿಲ್ಲಾ ಮುಖಂಡ ಸಂಗಮೇಶ ಬಬಲೇಶ್ವರ, ವಿವೇಕಾನಂದ ಯುವವೇದಿಕೆ ಅಧ್ಯಕ್ಷ ಅರವಿಂದ ಕೊಪ್ಪ, ಜಿಲ್ಲಾ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಆರ್.ಬಿ.ಉಪಾಸೆ, ಮಹಾರಥದ ಬಿಜಾಪುರ ಜಿಲ್ಲಾ ಸಂಚಾಲಕ ಶಾಂತೇಶ ಕಳಸಗೊಂಡ, ಬಿಇಒ ಎನ್.ವಿ.ಹೊಸೂರ, ದೈಹಿಕ ಶಿಕ್ಷಣ ಪರಿವೀಕ್ಷಕ ಎಸ್.ಬಿ.ಚಲವಾದಿ, ಪಶು ಸಂಗೋಪನೆ ಎಡಿ ಡಾ.ಎಸ್.ಸಿ.ಚೌಧರಿ, ಎಂಜಿವಿಸಿ ಟ್ರಸ್ಟ್ ಕಾರ್ಯದರ್ಶಿ ಅಶೋಕ ತಡಸದ, ಎಂಜಿವಿಸಿ ಕಾಲೇಜು ಪ್ರಾಚಾರ್ಯ ಎಸ್.ಜಿ.ನಂದಿ, ವಿಬಿಸಿ ಪ್ರೌಢಶಾಲೆಯ ಮುಖ್ಯಾಧ್ಯಾಪಕ ಅರವಿಂದ ಹಿರೇಮಠ, ಸಹಾಯಕ ಕ್ರೀಡಾಧಿಕಾರಿ ಎಚ್.ಎಲ್.ಕರಡ್ಡಿ ಮುಂತಾದವರು ವೇದಿಕೆಯಲ್ಲಿದ್ದರು.

 

ವಿಬಿಸಿ ಪ್ರೌಢಶಾಲೆ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಜ್ಞಾನಭಾರತಿ ಶಾಲೆ ವಿದ್ಯಾರ್ಥಿನಿಯರು ವಿವೇಕಾನಂದ ವಾಣಿ ಹೇಳಿದರು. ಮುಖ್ಯಾಧ್ಯಾಪಕ ಎಂ.ಎಂ.ಬೆಳಗಲ್ ಸ್ವಾಗತಿಸಿದರು. ಶಿಕ್ಷಕ ಎಸ್.ಬಿ.ಹಂಡರಗಲ್ ನಿರೂಪಿಸಿದರು.

 

ಅದ್ಧೂರಿ ಮೆರವಣಿಗೆ: ಶುಕ್ರವಾರ ಸಂಜೆ ಇಲ್ಲಿಯೇ ಬೀಡುಬಿಟ್ಟಿದ್ದ ವಿವೇಕಾನಂದ ಮಹಾರಥದ ಅದ್ಧೂರಿ ಮೆರವಣಿಗೆ ಪಟ್ಟಣದಲ್ಲಿ ಶನಿವಾರ ಮುಂಜಾನೆ ನಡೆಯಿತು. ಎಂಜಿವಿಸಿ ಕಾಲೇಜು ಹತ್ತಿರ ತಹಸೀಲ್ದಾರ ಸಿ.ಲಕ್ಷ್ಮಣ ತಾಲೂಕಾಡಳಿತದ ಪರವಾಗಿ ಮಹಾರಥವನ್ನು ಸ್ವಾಗತಿಸಿಕೊಂಡರು.

 

ಪ್ರಮುಖ ರಸ್ತೆ ಮತ್ತು ವೃತ್ತಗಳಲ್ಲಿ ಸಂಚರಿಸಿದ ಮೆರವಣಿಗೆಯಲ್ಲಿ ಪೂರ್ಣಕುಂಭ ಹೊತ್ತ ಮಹಿಳೆಯರು, 13 ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು, ಅಧಿಕಾರಿಗಳು, ಸಂಘಟನೆಗಳ ಮುಖಂಡರು, ಸಾರ್ವಜನಿಕರು ಪಾಲ್ಗೊಂಡಿದ್ದರು. ಪೊಲೀಸರು, ಎನ್‌ಸಿಸಿ, ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಜ್ಞಾನಭಾರತಿ ವಿದ್ಯಾಮಂದಿರದ ವಿದ್ಯಾರ್ಥಿಗಳು ವಿವೇಕಾನಂದ, ರಾಮಕೃಷ್ಣ ಪರಮಹಂಸ, ಶಾರದಾದೇವಿ ಮತ್ತಿತರರ ವೇಷಭೂಷಣ ಧರಿಸಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದು ವಿಶೇಷ ಆಕರ್ಷಣೆಯಾಗಿತ್ತು. ವಿದ್ಯಾರ್ಥಿಗಳು ಮೆರವಣಿಗೆಯುದ್ದಕ್ಕೂ ವಿವೇಕಾನಂದ ವಾಣಿ ಇರುವ ಸ್ಲೋಗನ್ ಹಿಡಿದುಕೊಂಡಿದ್ದರು.

 

History of project

ಇನ್ನೂ ಕೆಲವೇ ದಿನಗಳಲ್ಲಿ ಗ್ರಾಮದ ಸಮಸ್ತ ವಿವರ ಲಭ್ಯವಿರುತ್ತದೆ.

Our users

ನಿಮ್ಮ ಸಹಕಾರ ಹಾಗೂ ಮಾರ್ಗದರ್ಶನ ಕೊರುತ್ತೇವೆ.

Search site

shivanand.bh@gmail.com