ಬಮ್ಮನಹಳ್ಳಿ ವೆಬ್ ಸೈಟ್ ಗೆ ಸುಸ್ವಾಗತ

ತಾಜಾ ಸುದ್ದಿ

11/03/2014 02:48

0 ಒನ್ ಇಂಡಿಯಾ » ಕನ್ನಡ » ಸುದ್ದಿಜಾಲ » ಭಾರತ ಬಿಎಸ್ವೈ, ರೆಡ್ಡಿ ಬ್ರದರ್ಸ್ ಬಗ್ಗೆ ಬಿಜೆಪಿಗೆ ರಾಹುಲ್ ಪ್ರಶ್ನೆ Posted by: Gururaj Updated: Tuesday, March 11, 2014, 16:06 [IST] ಅಹಮದಾಬಾದ್, ಮಾ.11 : ಕಾಂಗ್ರೆಸ್ ಪಕ್ಷದ ಭ್ರಷ್ಟಾಚಾರದ ಕುರಿತು ವಾಗ್ದಾಳಿ ನಡೆಸುವ ಬಿಜೆಪಿ ನಾಯಕರಿಗೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಮಾತಿನ ಮೂಲಕವೇ ತಿರುಗೇಟು ನೀಡಿದ್ದಾರೆ. ಕರ್ನಾಟಕದಲ್ಲಿನ ಬಿಜೆಪಿ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಬಿಜೆಪಿ ನಾಯಕರು ಏಕೆ ಮಾತನಾಡುವುದಿಲ್ಲ ಎಂದು ಪ್ರಶ್ನಿಸಿದ್ದಾರೆ. ಮಂಗಳವಾರ ಗುಜರಾತ್ ಪ್ರವಾಸ ಕೈಗೊಂಡಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ಬೃಹತ್ ಸಾರ್ವಜನಿಕ ಸಮಾವೇಶ ಉದ್ದೇಶಿಸಿ ಮಾತನಾಡಿದರು. ತಮ್ಮ ಭಾಷಣದ ತುಂಬಾ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ ಅವರು, ಬಿಜೆಪಿ ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡುತ್ತಿಲ್ಲ ಎಂದು ದೂರಿದರು. ಸದಾ ಕಾಂಗ್ರೆಸ್ ಪಕ್ಷದ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಬಿಜೆಪಿ ನಾಯಕರು ಕರ್ನಾಟಕದಲ್ಲಿ ತಮ್ಮ ಪಕ್ಷದ ಬಿಎಸ್ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ನಡೆದ ಭ್ರಷ್ಟಾಚಾರದ ಕುರಿತು ಏಕೆ ಮಾತನಾಡುವುದಿಲ್ಲ ಎಂದು ಪ್ರಶ್ನಿಸಿದರು. ಈ ಕುರಿತು ನಿಮ್ಮ ಮುಖ್ಯಮಂತ್ರಿಗಳನ್ನು ಕೇಳಿ ಎಂದು ಗುಜರಾತ್ ಜನರಿಗೆ ಕರೆ ನೀಡಿದರು. [ಲೋಕಸಭೆ ಚುನಾವಣೆ ವೇಳಾಪಟ್ಟಿ] ಕರ್ನಾಟಕದಲ್ಲಿನ ನೈಸರ್ಗಿಕ ಸಂಪತ್ತನ್ನು ಲೂಟಿ ಹೊಡೆದ ಇಬ್ಬರು ಸಹೋದರರರಿಗೆ ಬಿಎಸ್ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಸಚಿವ ಸ್ಥಾನ ನೀಡಿದರು. ಭ್ರಷ್ಟಾಚಾರದ ವಿರುದ್ಧ ಮಾತನಾಡುವ ಬಿಜೆಪಿ ನಾಯಕರು ರೆಡ್ಡಿ ಬ್ರದರ್ಸ್ ಬಗ್ಗೆ ಏಕೆ ಮೌನ ವಹಿಸಿದ್ದಾರೆ? ಎಂದು ರಾಹುಲ್ ಕೇಳಿದರು. ರಾಹುಲ್ ಗಾಂಧಿ ಭಾಷಣದ ಮುಖ್ಯಾಂಶಗಳು * ಗುಜರಾತ್‌ ರಾಜ್ಯದಲ್ಲಿ ಜನ ಮಿಂಚುತ್ತಾರೆಂಬುದು ಸುಳ್ಳು, ಕೇವಲ ಹಣ ಇರುವವರು ಮಾತ್ರ ಇಲ್ಲಿ ತಲೆ ಎತ್ತಿದ್ದಾರೆ. ಆದರೆ, ಇಲ್ಲಿನ ಬಡ ಜನತೆ ಮತ್ತು ಮಹಿಳೆಯರ ಸಮಸ್ಯೆಗೆ ಸ್ಪಂಧಿಸಲು ಸರ್ಕಾರ ವಿಫಲವಾಗಿದೆ. * ಭಾರತ ದೇಶಕ್ಕೆ ಕಾವಲುಗಾರ ಬೇಡ. ಇಲ್ಲಿನ ಜನರಿಗೆ ಬೇಕಾಗಿರುವುದು ಅವರ ಹಕ್ಕು ಮತ್ತು ಅದನ್ನು ದೊರಕಿಸಿಕೊಡುವ ನಾಯಕ. *ಗುಜರಾತ್ ರಾಜ್ಯ ದೇಶಕ್ಕೆ ಮಹಾತ್ಮ ಗಾಂಧಿ ಮತ್ತು ಸರ್ದಾರ್ ವಲ್ಲಬಾಯ್ ಪಟೇಲ್ ಅಂತಹವರನ್ನು ನೀಡಿದೆ. ಅವರು ಕೇವಲ ವ್ಯಕ್ತಿಗಳಲ್ಲ, ಆದರ್ಶವಾದಿಗಳು. ಪಟೇಲ್ ಪ್ರತಿಮೆ ನಿರ್ಮಿಸುವ ಮೊದಲು ಅವರ ತತ್ವ ಸಿದ್ಧಾಂತಗಳ ಬಗ್ಗೆ ತಿಳಿದುಕೊಳ್ಳುವುದು ಒಳ್ಳೆಯದು. * ಕಾಂಗ್ರೆಸ್ ಮುಕ್ತ ಭಾರತ ನಿರ್ಮಾಣ ಮಾಡೋಣ ಎಂದು ಬಿಜೆಪಿ ಕರೆ ನೀಡುತ್ತದೆ. ಆದರೆ ಇಂತಹ ಕಾಂಗ್ರೆಸ್ ಪಕ್ಷವನ್ನು ಕಟ್ಟಿದವರು ಗಾಂಧಿ ಮತ್ತು ಪಟೇಲ್. ಇದನ್ನು ಪ್ರತಿಪಕ್ಷ ಸಹ ಒಪ್ಪಿಕೊಂಡಿದೆ. ಅವರ ಸಿದ್ಧಾಂತಗಳಿಗೆ ನೀವು ಬೆಲೆ ಕೊಡುವುದಿಲ್ಲವೇ? * ಭ್ರಷ್ಟಾಚಾರದ ವಿರುದ್ಧ ಬಿಜೆಪಿ ಹೋರಾಟ ಕೇಲವ ಪ್ರಚಾರಕ್ಕಾಗಿ, ಗುಜರಾತ್ ನಲ್ಲಿ ಹಲವು ಆರೋಪ ಎದುರಿಸುತ್ತಿರುವ ಮೂವರನ್ನು ಸಚಿವರನ್ನಾಗಿ ಮಾಡಿದ್ದೀರಿ. ಕರ್ನಾಟಕದಲ್ಲಿ ರಾಜ್ಯವನ್ನು ಕೊಳ್ಳೆ ಹೊಡೆದವರಿಗೆ ಸಚಿವ ಸ್ಥಾನವನ್ನು ಬಿಜೆಪಿ ಏಕೆ ನೀಡಿತು. Read in English: Rahul takes on Modi in Gujarat ಎಲ್ಲ ಪ್ರಮುಖ ಸುದ್ದಿಗಳ ಮೇಲೆ ಒನ್ಇಂಡಿಯಾ ನೋಟ. ನಿರಂತರ ಸುದ್ದಿ ಪಡೆಯಲು Facebook ಮತ್ತು Twitter ಮೇಲೆ ಇರಲಿ ಕಣ್ಣು. Topics: rahul gandhi, elections 2014, gujarat, karnataka, corruption, ರಾಹುಲ್ ಗಾಂಧಿ, ಲೋಕಸಭೆ ಚುನಾವಣೆ 2014, ಗುಜರಾತ್, ಕರ್ನಾಟಕ, ಭ್ರಷ್ಟಾಚಾರ Story first published:  Tuesday, March 11, 2014, 15:52 [IST] English summary In Gujarat rally Congress vice president Rahul Gandhi mocked the BJP`s claims of battling corruption and said "If you are so against corruption in Karnataka, there are two brothers who sold off the state so why were they kept in the cabinet?" SHARE THIS STORY 0 Related Articles ಪೂಜಾರಿ ಗೆಲ್ತಾರಾ? ಸೀನಿಯರ್ ಮೊಯ್ಲಿ ಗೇಮ್ ಪ್ಲಾನ್ ಏನು? ಗಾಂಧಿ ಹತ್ಯೆ : ರಾಹುಲ್ ವಿರುದ್ಧ ಆರೆಸ್ಸೆಸ್ ದೂರು ಬೆಂಗಳೂರು ಉತ್ತರ: 'ಹಗುರವಾದ' ಕಾಂಗ್ರೆಸ್ ಅಭ್ಯರ್ಥಿಗಳು ಬೆಂ.ಉತ್ತರಕ್ಕೆ ಕಾಂಗ್ರೆಸ್ ಅಭ್ಯರ್ಥಿ ಯಾರು? ಇಂದು ಉತ್ತರ ದಿನನಿತ್ಯ ಸುದ್ದಿ ಓದಲು ಇಲ್ಲಿ ಭೇಟಿ ನೀಡಿ https://m.oneindia.in/kannada/ ಆಪ್ಸ್ ಡೌನ್ ಲೋಡ್ ಮಾಡಿರಿAndroidIOS March 11, 2014 ರ ಇತರೆ ಸುದ್ದಿ/ಲೇಖನಗಳನ್ನು ಓದಿ ಅಭಿಪ್ರಾಯ ಬರೆಯಿರಿ Please read our comments policy before posting Click here to type in Kannada Subscribe Newsletter Find properties e.g.: "Bangalore" or "Mysore" More Headlines ಬಿಎಸ್ವೈ, ರೆಡ್ಡಿ ಬ್ರದರ್ಸ್ ಬಗ್ಗೆ ಬಿಜೆಪಿಗೆ ರಾಹುಲ್ ಪ್ರಶ್ನೆ ಹತ್ತೇ ದಿನಗಳಲ್ಲಿ ಮನೆಗೆ ಮರಳಲಿದ್ದಾರೆ ರೆಬಲ್ ಸ್ಟಾರ್ ಕಟಕಟೆಯಲ್ಲಿ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಮಾಜಿ ಪೊಲೀಸ್ ಟೈಗರ್ ಅಶೋಕ್ ಈಗ ಆಮ್ ಆದ್ಮಿ ಗೀತಾ ಸ್ಪರ್ಧೆ ಕುರಿತು ಶಿವಣ್ಣ ಹೇಳಿದ್ದೇನು? ಕರ್ನಾಟಕದ ಚುನಾವಣೆ ಸುದ್ದಿಗಳ ತುಣುಕು ನೋಟ ಮೋದಿ ಚಹಾಕ್ಕೆ ಚುನಾವಣಾ ಆಯೋಗ ಕೊಕ್ಕೆ ಗುಜರಾತಿಗೆ ಹೋಗಿ ಜನಪ್ರಿಯತೆ ಕಳೆದುಕೊಂಡ ಕೇಜ್ರಿವಾಲ್ ಮಾರ್ಚ್ - ಕ್ಯಾಲೆಂಡರ್ ಮೇಲೆ ತಿಂಗಳ ರಾಶಿ ಭವಿಷ್ಯ + Show More ಸಾರ್ವಜನಿಕ ಮತಗಟ್ಟೆ ನೈಟ್ ಲೈಫ್ ಅವಧಿ ವಿಸ್ತರಣೆಯಿಂದ ಯಾರಿಗೆ ಲಾಭ? ಸೆರೆ ಅಂಗಡಿಯವರಿಗೆ ಆದಾಯದ ಬೆನ್ನತ್ತಿರುವ ಸರಕಾರಕ್ಕೆ ಲಾಭಕ್ಕಿಂತ ಕುಡುಕರಿಗಾಗುವ ನಷ್ಟವೇ ಹೆಚ್ಚು ಸ್ವಂತ ಮನೆಯಲ್ಲಿ ಇರುವುದಕ್ಕಿಂತ ಸೌಭಾಗ್ಯ ಇನ್ನೊಂದಿಲ್ಲ. ಸ್ವಂತ ಮನೆಗಾಗಿ ಹಣ ಪಡೆಯಿರಿ STR to launch his brother Kuralaras... 

Read more at: https://kannada.oneindia.in/news/india/bjp-not-serious-about-fighting-against-corruption-rahul-082378.html

Back

Search site

shivanand.bh@gmail.com