ಬಮ್ಮನಹಳ್ಳಿ ವೆಬ್ ಸೈಟ್ ಗೆ ಸುಸ್ವಾಗತ

YOUG

22/04/2014 17:14

ನಿರುದ್ಯೋಗಕ್ಕಿಲ್ಲವೇ ಮುಕ್ತಿ ?

 

 

Parent Category: ROOT

job-1

ಮನೆ, ಜಮೀನು ಮಾರಿ ಮಕ್ಕಳ ವಿದ್ಯಾರ್ಹತೆ ಪ್ರಮಾಣ ಪತ್ರಗಳನ್ನು ಗಳಿಸುವಷ್ಟರಲ್ಲಿ ಎಷ್ಟೋ ಕುಟುಂಬಗಳು ಬರಿಗೈಯಲ್ಲಿ ಬೀದಿಗೆ ಬೀಳುವ ಈ ಕಾಲದಲ್ಲಿ. ಯಾವÀ ಅರ್ಹತೆ ಪಡೆದರೂ ಉದ್ಯೋಗಾವಕಾಶಗಳು ದೊರಕುತ್ತಿಲ್ಲ. ಅಂದರೆ ಉದ್ಯೋಗಾವಕಾಶಗಳ ಸೃಷ್ಟಿಯಾಗುತ್ತಿಲ್ಲ. ರಾತ್ರಿ ಹಗಲೆನ್ನದೇ ಕಷ್ಟ ಪಟ್ಟು ಗಳಿಸಿದ ಪ್ರಮಾಣಪತ್ರಗಳು ಜೀವನ ರೂಪಿಸುತ್ತಿಲ್ಲ. ಕೆಲಸ ಮಾಡಲು ಹಾತೊರೆÉಯುವ ಕೈಗಳಿಗೆ ಕೆಲಸದ ಭಾಗ್ಯವೇ ದೊರಕುತ್ತಿಲ್ಲ. ಮಕ್ಕಳನ್ನೇ ನಂಬಿದ್ದ ಎಷ್ಟೋ ತಂದೆ ತಾಯಂದಿರ ಆಸೆ, ಕನಸುಗಳೆಲ್ಲಾ ಮಣ್ಣು ಪಾಲಾಗುತ್ತಿವೆ.  ಕಾರಣ ಏನೆಂದು ಹುಡುಕುತ್ತ ಹೊರಟರೆ ಸಮಸ್ಯೆಗಳ ಸಮುದ್ರವೇ ಎದುರಾಗುತ್ತದೆ. ಒಂದು ಸರ್ಕಾರವಾಗಲಿ, ಆಡಳಿತ ವರ್ಗವಾಗಲಿ ಉದ್ಯೋಗ ಅವಕಾಶಗಳ ಸೃಷ್ಟಿಯಲ್ಲಿ ಮುಖ್ಯ ಪಾತ್ರವಹಿಸುತ್ತವೆ. ಆದರೆ ಅರಾಜಕತೆಯ ಇಂದಿನ ರಾಜಕೀಯ ಚಟುವಟಿಕೆಗಳು ರಾಜಕಾರಣಿಗಳ ಸ್ವಂತ ಬೆಳವಣಿಗೆಗೆ ಅನುವಾಗುವಂತಹ ಯೋಜನೆಗಳನ್ನು  ರೂಪಿಸುತ್ತಿವೆಯೇ ಹೊರತು. ಉದ್ಯೋಗಾವಕಾಶಗಳ ಸೃಷ್ಟಿಯತ್ತ ಒಂಚೂರು ಚಿಂತಿಸುತ್ತಿಲ್ಲ. 
ಅಮಾಯಕ ಜನರು ಸರ್ಕಾರಗಳಿಂದ ಏನನ್ನೂ ನೀರೀಕ್ಷಿಸದ ಹಂತಕ್ಕೆ ಇಂದಿನ ರಾಜಕಾರಣ ಬಂದು ತಲುಪಿದೆ.  ಹೀಗಿದ್ದಲ್ಲಿ ನಿರುದ್ಯೋಗಿಗಳ ಕಷ್ಟ ಕೇಳೋರ್ಯಾರು?
ಕಷ್ಟಪಟ್ಟು ಪಡೆದ ಪದವಿಗಳು ಉಪಯೋಗಕ್ಕೆ ಬಾರದೆ, ಜೀವ, ಜೀವನವನ್ನು ನಿಭಾಯಿಸಲು ಸಣ್ಣ ಪುಟ್ಟ ಕೆಲಸಗಳನ್ನು ಮಾಡಿ ಹಸಿವೆ ನೀಗಿಸಿಕೊಳ್ಳುವ ಪರಿಸ್ಥಿತಿ ಇಂದಿನ ಎಷ್ಟೋ ಯುವಕರದ್ದು. ದಿನದ ಕೂಲಿಗಾಗಿ ಎಲ್ಲೆಂದರಲ್ಲಿ ಕೆಲಸ ಮಾಡಿ ಹೊತ್ತಿನ ತುತ್ತು ಅನ್ನಕ್ಕೊಸ್ಕರ ತಮ್ಮ ಪದವಿಯ ಪ್ರತಿಷ್ಠ್ಠೆಯನ್ನು ಬದಿಗೊತ್ತಿ ಕೂಲಿಯಾಳುಗಳಾಗಿ ದುಡಿಯಬೇಕಾಗಿದೆ. ಇನ್ನು ಕೆಲವರು ತಮ್ಮ ಓದಿನ ಕನಸುಗಳನ್ನೇ ಮರೆತು ಬದುಕಿನ ಬಂಡಿ ಸಾಗಿಸಲು ಮತ್ತೊಬ್ಬರ ಅಡಿಯಾಳುಗಳಾಗಿ ಜೀವಿಸುತ್ತಿದ್ದಾರೆ. 
ಹೀಗೆ, ದೇಶಾದ್ಯಂತ ಕೋಟ್ಯಾಂತರ ಯುವಜನತೆ ಒಂದಲ್ಲಾ ಒಂದು ರೀತಿಯಲ್ಲಿ ಓದು ಬಿಟ್ಟು, ಯಂತ್ರಗಳಂತೆ ದುಡಿಯುತ್ತಿದ್ದಾರೆ. ಇದಕ್ಕೆ ಮುಖ್ಯ ಕಾರಣ ತಮ್ಮ ತಂದೆ ತಾಯಿಯಂದಿರ ಮತ್ತು ಪೆÇೀಷಕರ ಸಂಪಾದನೆ ಜೀವನ ನಿರ್ವಹಣೆಗೆ ಸಾಲದಿರುವುದು. ನಿಶ್ಚಿತ ಆದಾಯ ಇಲ್ಲದಿರುವುದು. ಅಂದರೆ ದುಡಿಯಲು ಭದ್ರತೆಯ ಕೆಲಸವಿಲ್ಲ. ಇದ್ದರೂ ದುಡಿಮೆಗೆ ತಕ್ಕ ಕನಿಷ್ಠ ವೇತನವಿಲ್ಲ. ಹೀಗಾಗಿಯೇ ಬಡವರ ಮನೆ ಮಂದಿಯೆಲ್ಲಾ ಹಗಲಿರುಳು ದುಡಿಯುವುದು. ಇಂತಹ ನಿರುದ್ಯೋಗ ಸಮಸ್ಯೆ ದಿನೇ ದಿನೇ ಭೀಕರಗೊಳ್ಳುತ್ತಿದೆ. ಯುವಜನತೆÉ ಹತಾಶೆ ಗೊಳ್ಳುತ್ತಿದ್ದಾರೆ. ವಿದ್ಯಾವಂತ ಮತ್ತು ಅರೆ ವಿದ್ಯಾವಂತ ಮತ್ತು ಅನಕ್ಷರಸ್ಥರು ಸೇರಿದಂತೆ ರಾಜ್ಯದಲ್ಲಿ ಕೋಟಿಗಟ್ಟಲೆ ನಿರುದ್ಯೋಗಿಗಳಿದ್ದಾರೆ. ಅಭಿವೃದ್ಧಿಯೇ ನಮ್ಮ ಮೂಲ ಮಂತ್ರ ಮತ್ತು ಉದ್ಯೋಗ ಸೃಷ್ಟಿಯೇ ನಮ್ಮ ಜಪ ಎಂದು ಅಧಿಕಾರಕ್ಕೇರುವ ಸರ್ಕಾರಗಳು ಉದ್ಯೋಗ ಸೃಷ್ಟಿಗೆ ಕಿಂಚಿತ್ತೂ ಗಮನ ಕೊಡುತ್ತಿಲ್ಲ.
ಸರ್ಕಾರಿ ಇಲಾಖೆಗಳಲ್ಲೇ ಎಷ್ಟೋ ಹುದ್ದೆಗಳು ಖಾಲಿ ಇದ್ದರೂ ನೇಮಕಾತಿ ಮಾಡಿಕೊಳ್ಳದೆ ಸರ್ಕಾರವೇ ಮುಂದೆ ನಿಂತು, ಭ್ರಷ್ಟಾಚಾರ ಎಸಗುವ ಖಾಸಗಿ ಕಂಪನಿ ಗಳಿಗೆ ಹೊರಗುತ್ತಿಗೆ ನೀಡುವ ಮುಖಾಂತರ ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳುತ್ತಿದೆ. 
ಕೇಂದ್ರ ಸರಕಾರದಡಿಯ ಇಲಾಖೆಗಳಲ್ಲಿ ಲಕ್ಷಾಂತರ ಹೆಚ್ಚು ಹುದ್ದೆಗಳು ಖಾಲಿ ಇವೆ.  ಇನ್ನು ಉದ್ಯೋಗ ಸೃಷ್ಟಿಗೆ ಪೂರಕ ಸಾರ್ವಜನಿಕ ಉದ್ಯಮಗಳನ್ನು ಪ್ರಾರಂಭಿಸದೇ ಸ್ಥಳೀಯವಾಗಿ ಸ್ವಯಂ ಉದ್ಯೋಗದ ಸೃಷ್ಟಿ ಸಾಧ್ಯವೇ ಇಲ್ಲ. ಡಿ ದರ್ಜೆ ನೌಕರರನ್ನು ಸಂಪೂರ್ಣ ವಾಗಿ ಗುತ್ತಿಗೆ ಆಧಾರದಲ್ಲಿ ನೇಮಿಸಿಕೊಳ್ಳುತ್ತಿರುವುದು ಆಳುವ ಸರ್ಕಾರಗಳÀ ಯುವಜನ ವಿರೋಧಿ ನೀತಿಯನ್ನು ಎತ್ತಿ ತೋರಿಸುತ್ತದೆ. ಇನ್ನೂ ಉನ್ನತ ವಿದ್ಯಾವಂತ ಯುವಜನರನ್ನು ಅರೆ ಉದ್ಯೋಗದಲ್ಲಿಟ್ಟು ಅಮಾನವೀಯವಾಗಿ ಸರ್ಕಾರಗಳು ದುಡಿಸಿಕೊಳ್ಳುತ್ತಿವೆ. 
ಇನ್ನು ನೇಮಕಾತಿ ಹೆಸರಿನಲ್ಲಿ ಅರ್ಜಿ ಹಾಕಲು  ನಿರುದ್ಯೋಗಿಗಳಿಂದ ತಲಾ 100ರಿಂದ 500ರವರೆಗೆ ಕೋಟಿಗಟ್ಟಲೇ ಹಣವನ್ನು ಸರ್ಕಾರಗಳು ವಸೂಲಿ ಮಾಡುತ್ತಿವೆ. ಇದೇ ರೀತಿಯಲ್ಲಿ ಯುಪಿಎಸ್‍ಸಿ, ಕೆಪಿಎಸ್‍ಸಿ ಮತ್ತು ಎಲ್ಲಾ ಇಲಾಖೆಗಳಿಂದಲೂ ನಿರುದ್ಯೋಗಿಗಳಿಂದ ಪ್ರತಿ ಬಾರಿ ಹಣವನ್ನು ಸುಲಿಗೆ ಮಾಡಲಾಗುತ್ತಿದೆ. ಇನ್ನು ವ್ಯಾಪಕ ಅವ್ಯವಹಾರಗಳ ಮುಖಾಂತರ ಬೆರಳೆಣಿಕೆಯಷ್ಟು ಉದ್ಯೋಗಗಳನ್ನು ವರ್ಷಗಟ್ಟಲೇ ವಿಳಂಬ ಮಾಡಿ ಭರ್ತಿ ಮಾಡಿಕೊಳ್ಳಲಾಗುತ್ತಿದೆ.  ಇಂತಹ ಯುವ ಜನ ವಿರೋಧಿ ನೀತಿಗಳನ್ನು ವಿರೋಧಿಸಬೇಕಿದೆ. ನಿರುದ್ಯೋಗದಿಂದ ಹತಾಶರಾಗುವ ಯುವಜನತೆ ಸಮಾಜಘಾತುಕ ಶಕ್ತಿಗಳ ಪ್ರಭಾವಕ್ಕೆ ಒಳಗಾಗುತ್ತಿದ್ದಾರೆ. ಈ ಎಲ್ಲ ಸಮಸ್ಯೆಗಳನ್ನು ಸರ್ಕಾರ ಏಕೆ ಸೂಕ್ಷ್ಮವಾಗಿ ಪರಿಶೀಲಿಸುತ್ತಿಲ್ಲ? ಈ ನಿರುದ್ಯೋಗಿಗಳ ಕಷ್ಟ ಕೇಳೋರ್ಯಾರು? ಪರಿಹಾರ ನೀಡೋರ್ಯಾರು..? ಕೆಂದ್ರದಲ್ಲಿ ರಚನೆಯಾಗುವ ಹೊಸ ಸರ್ಕರವಾದರೂ ನಿರುದ್ಯೋಗಕ್ಕೆ ಮುಕ್ತಿ ನೀಡುವುದೇ?

 
Back

Search site

shivanand.bh@gmail.com