ಬಮ್ಮನಹಳ್ಳಿ ವೆಬ್ ಸೈಟ್ ಗೆ ಸುಸ್ವಾಗತ

ನಮ್ಮ ಬಗ್ಗೆ

ಬೆಳಗಾವಿ: ಮಹಾಮಾನವತಾವಾದಿ ಹಾಗೂ ಭಾರತ ರತ್ನ ಡಾ|ಬಿ.ಆರ್‌. ಅಂಬೇಡ್ಕರ ಅವರ ತತ್ವ ಸಿದ್ಧಾಂತ ಇಂದಿಗೂ ಪ್ರಸ್ತುತವಾಗಿವೆ ಎಂದು ಜಿಲ್ಲಾಧಿಕಾರಿ ಮುನೀಷ್‌ ಮೌದ್ಗಿಲ್‌ ಹೇಳಿದರು. ಜಿಲ್ಲಾ ಆಡಳಿತದ ವತಿಯಿಂದ ನಗರದ ಡಾ| ಬಿ.ಆರ್‌. ಅಂಬೇಡ್ಕರ ಉದ್ಯಾನವನದಲ್ಲಿ ಏರ್ಪಡಿಸಲಾಗಿದ್ದ ಡಾ| ಬಾಬಾಸಾಹೇಬ ಅಂಬೇಡ್ಕರ ಅವರ 122ನೇ ಜನ್ಮ ದಿನಾಚರಣೆಯಲ್ಲಿ ಅವರು ಮಾತನಾಡಿದರು. ಚುನಾವಣಾ ನೀತಿ ಸಂಹಿತೆ ಇದ್ದರೂ ಕಾರ್ಯಕ್ರಮವನ್ನು ಅಚುrಕಟ್ಟಾಗಿ ಏರ್ಪಡಿಸಲು ಸಹಕರಿಸಿದ ಎಲ್ಲ ದಲಿತ ಸಂಘಟನೆಗಳ ಪದಾಧಿಕಾರಿಗಳನ್ನು ಅವರು ಅಭಿನಂದಿಸಿದರು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಂದೀಪ ಪಾಟೀಲ ಹಾಗೂ ಮಹಾನಗರಪಾಲಿಕೆ ಆಯುಕ್ತೆ ಪ್ರಿಯಾಂಕಾ ಫ್ರಾನ್ಸಿಸ್‌ ಮಾತನಾಡಿ, ಇಂದಿನ ಯುವಕರು ಅಂಬೇಡ್ಕರ ಅವರ ತತ್ವ ಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಬಲಿಷ್ಠ ಭಾರತ ನಿರ್ಮಾಣದಲ್ಲಿ ಮುಂಚೂಣಿಯಲ್ಲಿರಬೇಕೆಂದು ಹೇಳಿದರು. ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ ಜೆ.ಪಿ. ದೇವರಾಜ್‌ ಸ್ವಾಗತಿಸಿದರು. ಕಡೋಲಿಯಿಂದ ಆಗಮಿಸಿದ ಅಂಬೇಡ್ಕರ ಜ್ಯೋತಿಯನ್ನು ಜಿಲ್ಲಾಧಿಕಾರಿ ಮುನೀಷ್‌ ಮೌದ್ಗಿಲ್‌ ಅವರು ಸ್ವಾಗತಿಸಿ, ಅಂಬೇಡ್ಕರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ನಂತರ ಅಂಬೇಡ್ಕರ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಬೌದ್ಧ ಸ್ತುತಿ ಮಾಡಲಾಯಿತು. ವಿವಿಧ ದಲಿತ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು. ರಾಣಿ ಚನ್ನಮ್ಮ ವಿಶ್ವವಿದ್ಯಾಲಯ: ಭಾರತದ ನಾಗರಿಕರಿಗೆ ಸಂವಿಧಾನ ಕಲ್ಪಿಸಿಕೊಟ್ಟ ಸಾರ್ವಭೌಮ ಅಧಿಕಾರವಾದ ಮತದಾನ ಹಾಗೂ ಅದರ ಪವಿತ್ರತೆಯನ್ನು ಅರ್ಥಮಾಡಿಕೊಂಡು ಕಡ್ಡಾಯವಾಗಿ ಮತಚಲಾಯಿಸುವುದು ಡಾ| ಬಿ.ಆರ್‌. ಅಂಬೇಡ್ಕರ ಅವರಿಗೆ ಕೊಡುವ ಗೌರವವಾಗಿದೆ ಎಂದು ಕುಲಪತಿ ಪ್ರೊ| ಬಿ.ಆರ್‌. ಅನಂತನ್‌ ಹೇಳಿದರು. ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಬ್ರಹ್ಮಪುತ್ರ ವಸತಿನಿಲಯದಲ್ಲಿ ರವಿವಾರ ಡಾ| ಬಿ.ಆರ್‌. ಅಂಬೇಡ್ಕರ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿದರು. ಸಂವಿಧಾನ ಶಿಲ್ಪಿ ಡಾ| ಬಿ.ಆರ್‌. ಅಂಬೇಡ್ಕರ ಅವರು ಇಂದಿನ ಭಾರತಕ್ಕೆ ಹೆಚ್ಚು ಪ್ರಸ್ತುತವಾಗುತ್ತಿದ್ದಾರೆ. ಅವರು ರಚಿಸಿದ ಸಂವಿಧಾನದ ಆಶಯಗಳು ಇಂದು ಫಲಕೊಡುತ್ತಿವೆ ಎಂದು ಹೇಳಿದರು. ಆರ್‌ಪಿಡಿ ಮಹಾವಿದ್ಯಾಲಯದ ಅಧ್ಯಾಪಕ ಪ್ರೊ| ಆನಂದ ಮೆಣಸೆ ಮಾತನಾಡಿ, ಡಾ| ಅಂಬೇಡ್ಕರ ಅವರ ಬದುಕು ಹಾಗೂ ಹೋರಾಟದ ಬಗೆಗೆ ಘಟನಾವಳಿಗಳಾಧಾರಿತ ಉಪನ್ಯಾಸ ನೀಡಿದರು. ಡಾ| ಅಂಬೇಡ್ಕರ ಅವರು ಈ ದೇಶ ಮಾತ್ರವಲ್ಲ ಮನುಕುಲದ ಆದರ್ಶವಾಗಿದ್ದಾರೆ ಎಂದು ಅಭಿಪ್ರಾಯಪಟ್ಟರು. ಅವರ ಚಿಂತನೆಗಳು ಮತ್ತೆ ಮತ್ತೆ ಪುನರ್‌ ಮೌಲಿÂàಕರಣ ಪ್ರಕ್ರಿಯೆಗೆ ಒಳಪಡಿಸಬೇಕಾಗಿದೆ ಎಂದು ಹೇಳಿದರು. ಬ್ರಹ್ಮಪುತ್ರ ವಸತಿ ನಿಲಯದ ನಿಲಯಪಾಲಕ ಪ್ರೊ| ಡಿ.ಎನ್‌. ಪಾಟೀಲ್‌ ಸ್ವಾಗತಿಸಿದರು. ಕುಲಸಚಿವರು (ಮೌಲ್ಯಮಾಪನ) ಪ್ರೊ| ಜೆ.ಜಿ. ನಾಯಿಕ, ಹಣಕಾಸು ಅಧಿಕಾರಿ ಸಿದ್ರಾಮೇಶ್ವರ ಉಕ್ಕಲಿ, ವಿದ್ಯಾರ್ಥಿ ಕಲ್ಯಾಣಾಧಿಕಾರಿ ಪ್ರೊ| ವಿ.ಎಸ್‌. ಶೀಗೆಹಳ್ಳಿ ಉಪಸ್ಥಿತರಿದ್ದರು. ರಾಜ್ಯಶಾಸ್ತ್ರ ವಿಭಾಗದ ಅಧ್ಯಾಪಕ ಡಾ| ಪ್ರಕಾಶ ಕಟ್ಟಿಮನಿ ನಿರೂಪಿಸಿದರು. ವಸತಿ ನಿಲಯದ ವಿದ್ಯಾರ್ಥಿ ಪ್ರತಿನಿಧಿ ವಿನಾಯಕ ನಾಯಕ್‌ ಉಪಸ್ಥಿತರಿದ್ದರು. ಬೋಲಾರೆ ಬೋಲೆ ಜೈ ಭೀಮ ಬೋಲೋ... ಎಂಬ ಕಿವಿಗಡಚ್ಚಿಕ್ಕುವ ನಿನಾದದ ನಡುವೆ ನಗರದಲ್ಲಿ ನಡೆದ ಡಾ| ಬಿ.ಆರ್‌. ಅಂಬೇಡ್ಕರ ಅವರ ಜಯಂತಿಯನ್ನು ಸಂಭ್ರಮದಿಂದ ಆಚರಿಸಲಾಯಿತು. ಹತ್ತಾರು ಅಲಂಕಾರಿಕ ರೂಪಕಗಳು, ಆಕರ್ಷಕ ಭೀಮಜ್ಯೋತಿ ಯಾತ್ರೆ, ಸಂಗೀತದ ಅಬ್ಬರಕ್ಕೆ ಹೆಜ್ಜೆ ಹಾಕಿದ ಯುವಕರ ದಂಡು ಇವು ಮೆರವಣಿಗೆಯ ಆಕರ್ಷಣೆಯಾಗಿದ್ದವು. ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ಭೀಮಜ್ಯೋತಿ ಯಾತ್ರೆ ಜನತೆಯನ್ನು ಸೆಳೆಯಿತು. ರೂಪಕಗಳ ಮೆರವಣಿಗೆ ಕಿರ್ಲೋಸ್ಕರ್‌ ರಸ್ತೆ, ಮಾರುತಿ ಬೀದಿ, ಗಣಪತಿ ಬೀದಿ, ಶನಿವಾರಖೂಟ, ಕಾಕತಿವೇಸ್‌, ಚನ್ನಮ್ಮ¾ ವೃತ್ತದ ಮೂಲಕ ಸಾಗಿ ಅಂಬೇಡ್ಕರ ಉದ್ಯಾನವನ ಬಳಿ ಕೊನೆಗೊಂಡಿತು. ಸಾವಿರಾರು ಜನ ಮೆರವಣಿಗೆಯಲ್ಲಿ ಭಾಗವಹಿಸಿ ಮೆರಗು ತಂದರು. ಸಂವಿಧಾನ ರಚನೆಗೆ ಸಂಬಂಧಿಸಿದ ವಿವಿಧ ಆಯಾಮಗಳನ್ನೊಳಗೊಂಡ ಅಂಬೇಡ್ಕರ ಜೀವನಗಾಥೆಯ ರೂಪಕಗಳು ಸುಂದರವಾಗಿ ಮೂಡಿ ಬಂದವು. ಕೆಲವರು ಅಂಬೇಡ್ಕರರ್‌ ವೇಷದ ಮೂಲಕ ಗಮನಸೆಳೆದರು. ಬಾಲಕಿಯರು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ಸರಕಾರದ ವಿವಿಧ ಇಲಾಖೆಗಳು ನಾನಾ ಯೋಜನೆಗಳ ಸಾಕ್ಷ್ಯಚಿತ್ರವನ್ನು ಪ್ರಸ್ತುತಪಡಿಸಿದ್ದವು.

 

Search site

shivanand.bh@gmail.com